ಈ ವಾರ ಬಿಡುಗಡೆ `ರಾಜಾ ಹುಲಿ`
Posted date: 28 Mon, Oct 2013 – 09:39:33 AM

ಕನ್ನಡ ರಾಜ್ಯೋತ್ಸವಕ್ಕೆ ‘ರಾಜಾ ಹುಲಿ’ ಬಿಡುಗಡೆ ಆಗುತ್ತಿದೆ. ರಾಜ್ಯೋತ್ಸವದ ನೆನಪಿಗೆ ಹಂಸಲೇಖ ಅವರು ಒಂದು ಅದ್ಬುತವಾದ ಹಾಡನ್ನು ಓಂ ಅಂದರೆ ಹಿಂದೂ ಗುರುತು.....ಎಂದು ಪ್ರಾರಂಭ ಆಗುವ ಹಾಡಿಗೆ ಯಷ್ ಹಾಗೂ ಸ್ನೇಹಿತರು ಅಲ್ಲದೆ ನೂರಾರು ಸಹ ಕಲಾವಿದರು ಅಭಿನಯ ನೀಡಿದ್ದಾರೆ. ಶಂಕರ್ ಮಹಾದೇವಾನ್ ಅವರು  ಹಾಡಿರುವ ಹಾಡು ಬಹಳ ಕಾಲ ಉಳಿಯುವ ಹಾಡು. ರಾಜಣ್ಣ ಅವರನ್ನು ವಿನಯದ ಗುರುತು ಎಂದು ಹೇಳಲಾಗಿರುವ ಈ ಹಾಡು ಈಗ ಸಾಕಷ್ಟು ಜನಪ್ರಿಯತೆ ಗಳಿಸಿದೆ.

ಜನಪ್ರಿಯ ನಟ ಯಷ್ ಹಾಗೂ ಅಷ್ಟೇ ಜನಪ್ರಿಯ ನಟಿ ಮೇಘನ ರಾಜ್ ಅಭಿನಯದ ‘ರಾಜ ಹುಲಿ’ ನಿರ್ಮಾಪಕ ಕೆ ಮಂಜು ಅವರ 32ನೇ ಚಿತ್ರ ತಮಿಳಿನ ‘ಸುಂದರ ಪಾಂಡ್ಯನ್’ ಚಿತ್ರದ ಸ್ಪೂರ್ತಿ.  ‘ರಾಜಾ ಹುಲಿ’ ಪ್ರೀತಿ ಹಾಗೂ ಸ್ನೇಹದ ಬಗ್ಗೆ ಮನ ಮುಟ್ಟುವಂತೆ ಚಿತ್ರದ ಕಥಾ ಹಂದರದಲ್ಲಿ ಹೇಳಲಾಗಿದೆ - ಕೆ ಮಂಜು ಸಿನೆಮಾಸ್ ‘ರಾಜ ಹುಲಿ’ ಚಿತ್ರವನ್ನು ಜಯಣ್ಣ ಫಿಲ್ಮ್ಸ್ ಬಿಡುಗಡೆ ಮಾಡುತ್ತಿದೆ.

ಚಿತ್ರ ಸಾಹಿತ್ಯ ಹಾಗೂ ಚಿತ್ರ ಸಂಗೀತದಲ್ಲಿ ಮೇರು ವ್ಯಕ್ತಿ ಹಂಸಲೇಖ ಅವರು ಈ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ. ರೀಮೇಕ್ ಚಿತ್ರ ಆದರೂ ಎಲ್ಲ ಹಾಡುಗಳು ಒರಿಜಿನಲ್ ಆಗಿದೆ. ‘ವಾರಸದಾರ’ ನಂತರ ಗುರು ದೇಶ್ಪಾಂಡೆ ಅವರು ಕನ್ನಡದ ಪರಿಸರಕ್ಕೆ ತಕ್ಕಂತೆ ಈ ಚಿತ್ರವನ್ನು ಅಳವಡಿಸಿದ್ದಾರೆ.

ಈ ಚಿತ್ರದ ಛಾಯಾಗ್ರಾಹಕರು ಕೆ. ಎಂ ವಿಷ್ಣುವರ್ಧನ, ಹೊಸಮನೆ ಮೂರ್ತಿ ಅವರ ಕಲಾ ನಿರ್ದೇಶನ, ಕೆ. ಎಂ ಪ್ರಕಾಶ್ ಅವರ ಸಂಕಲನ, ಜಡೇಶ್ ಹಾಗೂ ರಮೇಶ್ ಹಾಸನ್ ನಿರ್ದೇಶಕ ಗುರು ದೇಶ್ಪಾಂಡೆ ಅವರಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಯಷ್ ಅವರ ಸ್ನೇಹಿತನ ಪಾತ್ರದಲ್ಲಿ ಹರ್ಷ, ಗಿರೀಷ್, ವಶಿಷ್ಠ, ಚಿಕ್ಕಣ್ಣ, ಅಶ್ವಿನಿ (ನಾಯಕಿ) ಸೊಸೆ ಪಾತ್ರದಲ್ಲಿ, ಹಾಗೂ ಹೆಸರಾಂತ ನಟ ಚರಣ್ ರಾಜ್ ತಂದೆಯ ಪಾತ್ರದಲ್ಲಿ ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed